  ಮೂಲದೊಡನೆ ಪರಿಶೀಲಿಸಿ

ಕೋಬಾಲ್ಟ್

ಒಂದು ಲೋಹ ರಾಸಾಯನಿಕ ಧಾತು.  ಸಂಕೇತ ಅo. ಪರಮಾಣು ಸಂಖ್ಯೆ 27 ಮತ್ತು ಪರಮಾಣುತೂಕ 58.93.   ಆವರ್ತಕೋಷ್ಟಕದಲ್ಲಿ 8ನೆಯ ಗುಂಪಿನ (ಗ್ರೂಪ್) ಸಂಕ್ರಾಂತಿ ಲೋಹ. ಎಲೆಕ್ಟ್ರಾನಿಕ್ ವಿನ್ಯಾಸ .  ದ್ರವನ ಬಿಂದು 1.4930 ಸೆಂ. ಕುದಿಬಿಂದು 3,5200 ಸೆಂ. ಘನದ ಸಾಂದ್ರತೆ (g/ಛಿm3 ಗಳಲ್ಲಿ) 210 ಸೆಂ. ನಲ್ಲಿ 8.71; ಘನರೂಪದ ಹರಳಿಗೆ ಇದು 8.67. ಕೋಬಾಲ್ಟ್ ಪದದ ವ್ಯುತ್ಪತ್ತಿ ಜರ್ಮನ್ ಪದ ಕೋಬಾಲ್ಡ್‍ದಿಂದ ಆಗಿದೆ.  ಕೋಬಾಲ್ಡ್ ಎಂದರೆ ಹಾನಿಕಾರಕಭೂತ ಎಂದರ್ಥ. ಈ ಪದವನ್ನು ಮೊದಲಿಗೆ, ಗಣಿಗಳನ್ನು ಸುತ್ತಾಡಿ ಗಣಿಕೂಲಿಕಾರರನ್ನು ತೊಂದರೆಗೊಳಿಸುವ ಕುಬ್ಜಭೂತಗಳನ್ನು ಸೂಚಿಸಲಿಕ್ಕೂ ಅನಂತರ ಹುಸಿ ಅದುರುಗಳನ್ನು ಮತ್ತು ವಿಷಯುಕ್ತವಾದ ಅದುರುಗಳನ್ನು ಸೂಚಿಸಲಿಕ್ಕೂ ಉಪಯೋಗಿಸಲಾಗುತ್ತಿತ್ತು. 1735ರಲ್ಲಿ ಬ್ರ್ಯಾಂಟ್ ಎಂಬ ವಿಜಾÐನಿ ಕೋಬಾಲ್ಟ್ ಲೋಹವನ್ನು ಅದರ ಅದುರಿನಿಂದ ಬೇರ್ಪಡಿಸಿ ಅದನ್ನು ಕೋಬಾಲ್ಟರೆಕ್ಸ್ ಎಂದು ಕರೆದ.  ಆಗಿನ ಕೋಬಾಲ್ಪರೆಕ್ಸೇ ಈಗಿನ ಕೋಬಾಲ್ಟ್ ಎಂದು ಹೇಳಬಹುದು.  ಬರ್ಗ್‍ಮನ್ನನೆಂಬ ವಿಜಾÐನಿ ಅದರ ಗುಣಲಕ್ಷಣಗಳನ್ನು 1780ರಲ್ಲಿ ಅಭ್ಯಾಸಮಾಡಿದ.

ಲಭ್ಯ: ಉಲ್ಕಾಪಿಂಡಗಳಲ್ಲಿ ಲೋಹರೂಪದ ಕೋಬಾಲ್ಟ್ ಅಲ್ಪಪರಿಮಾಣದಲ್ಲಿ ಸಿಕ್ಕುತ್ತದೆ.  ಕೋಬಾಲ್ಟ್ ಮುಖ್ಯವಾಗಿ ದೊರೆಯುವುದು ಆರ್ಸೆನಾಯಿಡ್ ಸಂಯುಕ್ತರೂಪದಲ್ಲಿ-ಸ್ಮಾಲ್‍ಟೈಟ್ [(ಅo ಓi ಈe) ಂS4], ಕೋಬಾಲ್ಟ್‍ಗ್ಲಾನ್ಸ್ [(ಅo-ಈe)ಂsS], ಲಿನ್ನೆಯಾಟ್ [(ಅo ಓi ಈe)3S4], ಎರಿಥ್ರಾಯ್ಟ್ [ಅo3(ಂsಔ4)2]  ಎಂಬವುಗಳಲ್ಲಿ.  ಭಾರತದಲ್ಲಿ ಕೋಬಾಲ್ಟ್ ಅದುರುಗಳು ರಾಜಸ್ಥಾನ ಮತ್ತು ನೇಪಾಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಕ್ಕುತ್ತವೆ.  ಕೆನಡದ ಆಂಟೇರಿಯೋದ ಹತ್ತಿರ ನಿಕಲ್ ಮತ್ತು ಬೆಳ್ಳಿಮಿಶ್ರಿತವಾದ ಕೋಬಾಲ್ಟಿನ ಅದುರುಗಳಲ್ಲಿ ಹೆಚ್ಚಿನ ಮೊತ್ತದಲ್ಲಿ ಕೋಬಾಲ್ಟ್ ಸಿಕ್ಕುತ್ತದೆ.

ತಯಾರಿಕೆ :  ಅದುರನ್ನು ಪುಡಿಪುಡಿಮಾಡಿ ಚೆನ್ನಾಗಿ ಅರೆದು ಆ ಮೇಲೆ ನೊರೆ ತೇಲುವ ವಿಧಾನದಿಂದ (ಫ್ರಾತ್ ಫ್ಲೊಟೇಶನ್ ಮೆಥಡ್) ಕೇಂದ್ರೀಕರಿಸುತ್ತಾರೆ. ಅನಂತರ ಅದನ್ನು ದೊಡ್ಡ ರಾಶಿಮಾಡಿ ಹುರಿಯುವುದರಿಂದ ಅದರಲ್ಲಿರುವ ಗಂಧಕ ಮತ್ತು ಆರ್ಸೆನಿಕ್‍ಗಳು ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತವೆ.  ಕಾಯಿಸಿದ ಅದುರನ್ನು ಸುಣ್ಣ ಮತ್ತು ಮರಳಿನೊಡನೆ ಮಿಶ್ರಮಾಡಿ ಸಣ್ಣ ಊದು ಕುಲುಮೆಯಲ್ಲಿ (ಬ್ಲಾಸ್ಟ್ ಫರ್ನೇಸ್) ಕರಗುವ ವರೆಗೆ ಕಾಯಿಸುತ್ತಾರೆ. ಹೀಗೆ ಕಾಯಿಸುವುದರಿಂದ ಕಬ್ಬಿಣದ ಹೆಚ್ಚು ಮೊತ್ತ ಕಬ್ಬಿಣದ ಸಿಲಿಕೇಟ್ (ಈeSiಔ3) ರೂಪದಲ್ಲಿಯೂ ಉಳಿದ ಅದುರು ಎರಡು ಪದರಗಳಲ್ಲಿಯೂ ಬೇರ್ಪಡುತ್ತವೆ. ಮೇಲಿನ ಪದರದ ಅಶುದ್ಧ ಕೋಬಾಲ್ಟ್, ನಿಕಲ್, ಕಬ್ಬಿಣ ಮತ್ತು ತಾಮ್ರದ ಆರ್ಸೆನಾಯಿಡ್ ಇರುತ್ತವೆ.  ಇದಕ್ಕೆ ಸ್ಪಿಸ್ ಎಂದು ಹೆಸರು. ಕೆಳಗಿನ ಪದರದ ಅಶುದ್ಧ ಬೆಳ್ಳಿ ಇರುತ್ತದೆ. ಮೇಲಿನ ಸ್ಪಿಸನ್ನು ಬೇರ್ಪಡಿಸಿ, ಆರಿಸಿ, ಚೆನ್ನಾಗಿ ಪುಡಿಪುಡಿಮಾಡಿ ಉಪ್ಪಿನೊಂದಿಗೆ ಮಿಶ್ರಮಾಡಿ ಪರಾವರ್ತಿನಿ (ರೆವರ್ಬರೇಟರಿ) ಕುಲುಮೆಯಲ್ಲಿ ಕಾಯಿಸುತ್ತಾರೆ. ಈ ಪ್ರಯೋಗದಿಂದ ಆರ್ಸೆನಿಕ್ ಆಕ್ಸೈಡ್ ರೂಪದಿಂದ ಆರ್ಸೆನಿಕ್ ಹೊರಗೆ ಹೋಗುತ್ತದೆ. ಉಳಿದ ಲೋಹಗಳಾದ ನಿಕಲ್, ಕೋಬಾಲ್ಟ್ ಮತ್ತು ತಾಮ್ರಗಳು ಕ್ಲೋರೈಡ್ ಆಗಿ ಮಾರ್ಪಡುತ್ತವೆ. ಈ ಕ್ಲೋರೈಡುಗಳನ್ನು ನೀರಿನಲ್ಲಿ ಕರಗಿಸಿ ಸಾರವನ್ನು ತೆಗೆಯುತ್ತಾರೆ. ಸಾರದಲ್ಲಿರುವ ತಾಮ್ರವನ್ನು ಕಬ್ಬಿಣ ತುಣುಕುಗಳನ್ನು ಹಾಕಿಯೂ ಕಬ್ಬಿಣವನ್ನು ಖಡುವನ್ನು ಹಾಕಿಯೂ ತೆಗೆಯುತ್ತಾರೆ. ಅನಂತರ ಇದನ್ನು ಸೋಸಿ, ಅದಕ್ಕೆ ಕಾಸ್ಟಿಕ್ ಸೋಡ (ಓಚಿಔಊ) ಹಾಕುತ್ತಾರೆ. ಇದರಿಂದ ಕೋಬಾಲ್ಟ್ ಮತ್ತು ನಿಕಲ್ಲುಗಳು ಹೈಡ್ರಾಕ್ಸೈಡ್ ರೂಪದಲ್ಲಿ ಒತ್ತರಿಸುತ್ತವೆ. ಈ ಒತ್ತರಗಳನ್ನು (ಪ್ರೆಸಿಪಿಟೇಟ್ಸ್) ಒಣಗಿಸಿ ದಹನ ಮಾಡುವುದರಿಂದ ಅವು ಕೋಬಾಲ್ಟ್ ಮತ್ತು ನಿಕಲ್ ಆಕ್ಸೈಡಾಗಿ ಪರಿವರ್ತನೆಗೊಳ್ಳುತ್ತವೆ.  ಕೋಬಾಲ್ಟನ್ನು ನಿಕಲ್‍ನಿಂದ ಬೇರ್ಪಡಿಸಲಿಕ್ಕೆ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮೋಂಡ್ ಎಂಬಾತನ ವಿಧಾನ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಇಂಗಾಲದ ಮಾನಾಕ್ಸೈಡನ್ನು 500 ಸೆಂ.ಉಷ್ಣತೆಯಲ್ಲಿ ಬಿಡಲಾಗುತ್ತದೆ.  ಇದರಿಂದ ನಿಕಲ್ ಅನಿಲರೂಪ ನಿಕಲ್ ಕಾರ್ಬೊನಿಲ್ [ಓi(ಅo)4] ಆಗುತ್ತದೆ.  ಆದರೆ ಕೋಬಾಲ್ಟ್, ತಾಮ್ರ ಮತ್ತು ಕಬ್ಬಿಣ ಈ ಪರಿಸ್ಥಿತಿಯಲ್ಲಿ ಅನಿಲರೂಪದ ಕಾರ್ಬೊನಿಲ್ ಆಗುವುದಿಲ್ಲ. ಕೋಬಾಲ್ಟ್ ಮತ್ತು ನಿಕಲ್ ಆಕ್ಸೈಡುಗಳನ್ನು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಕರಗಿಸಿ ಆ ದ್ರಾವಣವನ್ನು ಖಡುವಿನಿಂದ ತಡಸ್ಥೀಕರಿಸುವುದು ಇನ್ನೊಂದು ವಿಧಾನ.  ಇದಕ್ಕೆ ಚೆಲುವೆ ಪುಡಿ (ಬ್ಲೀಚಿಂಗ್ ಪೌಡರ್) ಹಾಕುವುದರಿಂದ ಕೋಬಾಲ್ಟ್ ಹೈಡ್ರಾಕ್ಸೈಡ್ ರೂಪದಿಂದ ಒತ್ತರಿಸಲ್ಪಡುತ್ತದೆ. ಆದರೆ ನಿಕಲ್ ಈ ಪರಿಸ್ಥಿತಿಯಲ್ಲಿ ಒತ್ತರಿಸುವುದಿಲ್ಲ. 2ಅoಅಟ2 + 2ಅಚಿ(ಔಊ)2 + ಅಚಿಔಅಟ2 + ಊ2ಔ (2ಅo(ಔಊ)3(+3ಅಚಿಅಟ2 ಕೋಬಾಲ್ಟ್ ಹೈಡ್ರಾಕ್ಸೈಡನ್ನು ತೊಳೆದು ಒಣಗಿಸಿ, ದಹಿಸುವುದರಿಂದ ಅದು ಕೋಬಾಲ್ಟೊ ಆಕ್ಸೈಡ್ ಆಗುತ್ತದೆ.

ಹೀಗೆ ಪಡೆದ ಆಕ್ಸೈಡನ್ನು ಲೋಹಕ್ಕೆ ಅಪಕರ್ಷಿಸಲು ಅದನ್ನು ಇಂಗಾಲ ಮತ್ತು ಸುಣ್ಣದ ಹರಳುಗಳೊಂದಿಗೆ ವಿದ್ಯುತ್ ಕುಲುಮೆಯಲ್ಲಿ ಕಾಯಿಸಬೇಕು. ಈ ಅಪಕರ್ಷಣೆಯನ್ನು ಜಲಜನಕ ಅನಿಲದಿಂದಾಗಲಿ ಇಂಗಾಲದ ಮಾನಾಕ್ಸೈಡಿನಿಂದಾಗಲಿ ಇಲ್ಲವೇ ಅಲ್ಯೂಮಿನಿಯಂನಿಂದಾಗಲಿ ಮಾಡಬಹುದು.
ಅo3ಔ4+4ಅ(3ಅo+4ಅಔ

3 ಅo3ಔ4+ 8ಂಟ(9ಅo+4ಂಟ2ಔ3
ಈ ಅಪಕರ್ಷಣೆಯನ್ನು ಅಲ್ಯೂಮಿನಿಯಂನಿಂದ ಮಾಡುವುದು ಅತಿ ಸುಲಭ. ಇದಕ್ಕೆ ಗೋಲ್ಡ್‍ಶ್ಮಿಟ್ ವಿಧಾನ ಎಂದು ಹೆಸರು.  ಇದರಿಂದ ನಿಕಟವಾದ (ಕಾಂಪ್ಯಾಕ್ಟ್) ಲೋಹ ಸಿಕ್ಕುತ್ತದೆ.  ಕೋಬಾಲ್ಟ್ ಸಲ್ಫೇಟ್, ಸ್ವಲ್ಪ ಅಮೋನಿಯ ಮತ್ತು ಅಮೋನಿಯಂ ಸಲ್ಫೇಟ್ ಇವುಗಳ ದ್ರಾವಣವನ್ನು ವಿದ್ಯುದ್ವಿಶ್ಲೇಷಿಸಿ ಅತಿಶುದ್ಧವಾದ ಧಾತುವನ್ನು ಪಡೆಯಬಹುದು. ಕೋಬಾಲ್ಟ್ ಆಕ್ಸೈಡನ್ನು ಫಾರ್ಮಿಕ್ ಆಮ್ಲದಲ್ಲಿ ಕರಗಿಸಿ ದ್ರಾವಣವನ್ನು ವಿದ್ಯುದ್ವಿಶ್ಲೇಷಿಸಿದರೆ 99.9% ಶುದ್ಧತೆಯುಳ್ಳ ಲೋಹವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

ಭೌತಗುಣಗಳು: ಕೋಬಾಲ್ಟ್ ಬೆಳ್ಳಿಯ ಹಾಗೆ ಬೆಳ್ಳಗೆ ಹಾಗೂ ಹೊಳಪುಳ್ಳ ಬಿರುಸು ಲೋಹ. ಅದನ್ನು ತಗಡಾಗಿ ತಟ್ಟಬಹುದು. ಮತ್ತು ತಂತಿಯಾಗಿ ಎಳೆಯಬಹುದು.  ಇದರ ಲೋಹಚುಂಬಕ ಗುಣ 1.1500 ಸೆಂ. ಉಷ್ಣತೆಯ ವರೆಗೂ ಉಳಿದಿರುತ್ತದೆ.
ಸಾಮಾನ್ಯ ಉಷ್ಣತೆಗಳಲ್ಲಿ ಒಣಗಾಳಿ ಈ ಲೋಹದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.  ಆದರೆ ಮೇಲ್ಮಟ್ಟದ ಉಷ್ಣತೆಯಲ್ಲಿ ಅದು ಉರಿಯುವುದು. ಹುಡಿಹಿಟ್ಟು ಕೋಬಾಲ್ಟ್‍ಗೆ ಅಗ್ನಿಗ್ರಾಹಕ ಗುಣವಿದೆ.  ನೀರು ಕೋಬಾಲ್ಟಿನ ಮೇಲೆ ವರ್ತಿಸುವುದಿಲ್ಲ.  ಆದರೆ ತಪ್ತವಾದ ಲೋಹ ಉಗಿಯನ್ನು ವಿಘಟಿಸುತ್ತದೆ.
3ಅo+4 ಊ2ಔ(( ಅo3ಔ4+4 ಊ2
ಹೈಡ್ರೊಕ್ಲೋರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಗಡಕೋಬಾಲ್ಟ್ ವರ್ತಿಸಿ ಕೋಬಾಲ್ಟಸ್ ಲವಣಗಳನ್ನೂ ಜಲಜನಕ ಅನಿಲವನ್ನೂ ಉತ್ಪಾದಿಸುತ್ತದೆ.

ಅo+2ಊಅಟ(ಅoಅಟ2 + ಊ2
ಅo+ಊ2Sಔ4(ಅoSಔ4+ ಊ2
50% ಇರುವ ನೈಟ್ರಿಕ್ ಆಮ್ಲದಲ್ಲಿ ಕೋಬಾಲ್ಟ್ ಸುಲಭವಾಗಿ ಕರಗುತ್ತದೆ.  ಆದರೆ ಹೊಗೆಬೀರುವ ತಣ್ಣಗಿನ ಸಾರ ನೈಟ್ರಿಕ್ ಆಮ್ಲದಲ್ಲಿ ಅದು ನಿಷ್ಕ್ರಿಯ.  ಜಲಜಲನಕ, ಗಂಧಕ, ರಂಜಕ ಮತ್ತು ಬೊರಾನುಗಳು ಕೋಬಾಲ್ಟಿನ ಮೇಲೆ ವರ್ತಿಸುತ್ತವೆ.  ಆದರೆ ನೈಟ್ರೊಜನ್ ವರ್ತಿಸುವುದಿಲ್ಲ.

ಉಪಯೋಗಗಳು:  ಮಿಶ್ರಲೋಹಗಳ ಉತ್ಪಾದನೆಯಲ್ಲಿ ಕೋಬಾಲ್ಟಿನ ಉಪಯೋಗ ಉಂಟು.  ಸ್ಥಿರಲೋಹಚುಂಬಕಗಳ ರಚನೆಗೆ 35% ಕೋಬಾಲ್ಟ್ ಇರುವ ಕೋಬಾಲ್ಟ್ ಉಕ್ಕು ಬೇಕಾಗುತ್ತದೆ.  ಕೋಬಾಲ್ಟ್, ಕ್ರೋಮಿಯಂ ಮತ್ತು ಅಲ್ಪಾಂಶ ಟಂಗ್‍ಸ್ಟನ್ ಇರುವ ಸ್ಟೆಲ್ಲೈಟನ್ನ್ನು ಶಸ್ತ್ರಚಿಕಿತ್ಸೆಯ ಉಪಕರಣಗಳ ಮತ್ತು ಕರ್ತನೋಪಕರಣಗಳ ನಿರ್ಮಾಣದಲ್ಲಿ ಉಪಯೋಗಿಸುತ್ತಾರೆ.  ಕೋಬಾಲ್ಟ್, ಕಬ್ಬಿಣ ಮತ್ತು ಕ್ರೋಮಿಯಂ ಇರುವ ಮಿಶ್ರಲೋಹ ಕೋಕ್ರೋಮ್ ಎಂಬುದು ವಿದ್ಯುತ್ ಕೈಗಾರಿಕೆಯಲ್ಲೂ ಕರ್ತನೋಪಕರಣಗಳ ತಯಾರಿಕೆಯಲ್ಲಿಯೂ ಅವಶ್ಯ. ಗಾಜಿನ ಮತ್ತು ಪಿಂಗಾಣಿ ಪಾತ್ರೆಗಳಿಗೆ ಬಣ್ಣ ಕೊಡುವ ಕಾರ್ಯದಲ್ಲಿ ಕೋಬಾಲ್ಟನ್ನು ತಳಹದಿಯನ್ನಾಗಿ ಉಪಯೋಗಿಸುತ್ತಾರೆ. ವೈದ್ಯದಲ್ಲಿ, ಮುಖ್ಯವಾಗಿ ಏಡಿಗಂತಿ ಸಂಬಂಧಿ ವ್ರಣಗಳ ನಿರ್ಮೂಲನ ಚಿಕಿತ್ಸೆಯಲ್ಲಿ, ಕೋಬಾಲ್ಟಿನ ಉಪಯೋಗ ಉಂಟು.

ಸಂಯುಕ್ತಗಳು: ಕೋಬಾಲ್ಟಸ್ ಸಂಯುಕ್ತಗಳು ಕೋಬಾಲ್ಟಿನ ಅತಿಸಾಮಾನ್ಯ ಸಂಯುಕ್ತಗಳು. ಈ ಸಂಯುಕ್ತಗಳಲ್ಲಿ ಕೋಬಾಲ್ಟಿನ ವೇಲೆನ್ಸಿ 2. ಇವು ಸ್ಥಿರ ಸಂಯುಕ್ತಗಳು.  ಇವು ಸಜಲವಾಗಿದ್ದರೆ ನೀಲವಾಗಿಯೂ ನಿರ್ಜಲವಾಗಿದ್ದರೆ ಗುಲಾಬಿ ಅಥವಾ ಕೆಂಪು ಆಗಿಯೂ ಇರುತ್ತವೆ. ನೀರಿನಲ್ಲಿ ಮಿಶ್ರಿತವಾಗಿದ್ದರೆ ಗಡುಸಾದ ಕೆಂಪು ಬಣ್ಣ ಇರುತ್ತದೆ. ಸರಳ ಕೋಬಾಲ್ಟಿಕ್ ಸಂಯುಕ್ತಗಳಲ್ಲಿ ಕೋಬಾಲ್ಟಿನ ವೇಲೆನ್ಸಿ 3. ಸಂಕೀರ್ಣ ಸಂಯುಕ್ತಗಳಲ್ಲಿ ಇದು 3 ಮತ್ತು 4. ಕೋಬಾಲ್ಟಿನ ವೇಲೆನ್ಸಿ 4 ಇರುವ ಸಂಕೀರ್ಣ ಸಂಯುಕ್ತಗಳು ವಿಪುಲವಾಗಿವೆ.	  		                                                    (ಬಿ. ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ